ಕಾರ್ಕಡ- ಅಜಯ್ ಕ್ರಿಕೆಟ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯ ಆಯೋಜನೆ-karavalivaninews
1/24/2023
0
ಕೋಟ: ಅಜಯ್ ಕ್ರಿಕೆಟ್ ಕ್ಲಬ್ ಕುಂಜುಗುಡಿ ಸಾಲಿಗ್ರಾಮ ಇವರ ಆಶ್ರಯದಲ್ಲಿ 35ನೇ ವರ್ಷದ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಅಜಯ್ ಟ್ರೋಫಿ 2023 ಕಾರ್ಯಕ್ರಮ ಶನಿವಾರ ಕಾರ್ಕಡ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಕೆ. ರಾಜು ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮನೊರಂಜನೆಗೆ ಸಿಮಿತವಾಗದೆ ಅದೊಂದು ದೈಹಿಕ ಹಾಗೂ ಮಾನಸಿಕ ಸ್ಥಿರತೆಯ ಜೊತೆ ಸಾಧನೆಯ ವೇದಿಕೆಯನ್ನು ಕಲ್ಪಿಸುತ್ತದೆ.ಗ್ರಾಮೀಣ ಪರಿಸರದ ಪ್ರತಿಭೆಗಳ ಅನಾವರಣಕ್ಕೆ ಈ ಪರಿಸರ ಸಹಕಾರಿಯಾಗಲಿದೆ ಅಜಯ್ ಕ್ರಿಕೆಟ್ ಕ್ಲಬ್ ಕ್ರೀಡೆಗೆ ಹೆಚ್ಚಿನ ಆಯಾನ ನೀಡುವ ಜೊತೆ ಹೊಸ ಪರಿಭಾಷೆಯನ್ನು ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಟು ರಾಜ ಸಾಲಿಗ್ರಾಮ ಸೇರಿದಂತೆ ಅಜಯ್ ಕ್ರಿಕೆಟ್ ಕ್ಲಬ್ನ 9 ಜನ ಅನುಭವಿ ಆಟಗಾರರನ್ನು ಸನ್ಮಾನಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪ.ಪಂ ಸದಸ್ಯ ಸಂಜೀವ ದೇವಾಡಿಗ,ಉದ್ಯಮಿ ಹರೀಶ್ ರಾವ್, ಸಾಮಾಜಿಕ ಕಾರ್ಯಕರ್ತ ಅಚ್ಯುತ ಪೂಜಾರಿ, ಸ್ಪೋಟ್ಸ್ ಕ್ಲಬ್ ಕನ್ನಡ ವೆಬ್ನ ಸಂಯೋಜಕ ರಾಮಕೃಷ್ಣ ಆಚಾರ್ಯ,ಅಜಯ್ ಕ್ರಿಕೆಟ್ ಕ್ಲಬ್ನ ಪ್ರಮುಖರಾದ ಸತ್ಯನಾರಾಯಣ, ನಾಗೇಶ್ ಪೂಜಾರಿ, ಮಹೇಶ್ ಭಂಡಾರಿ, ಚ್ಯವನ್ ಭಂಡಾರಿ ಮಾದವ, ತಮ್ಮಯ್ಯ, ಪ್ರಸಾದ್ ಕಾವಡಿ, ಸತೀಶ್ ಗಾಣಿಗ ಉಪಸ್ಥಿತರಿದ್ದರು. ಅಜಯ್ ಕ್ರಿಕೆಟ್ ಕ್ಲಬ್ನ ಮಾಜಿ ಅಧ್ಯಕ್ಷ ಕೆ.ಮಂಜುನಾಥ ನಾಯರಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.