Type Here to Get Search Results !

delete

ಬ್ರಹ್ಮಾವರ ಎಸ್.ಎಮ್.ಎಸ್ ಕಾಲೇಜು ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಟ್ಟದ ಅಂತರ್ ವಲಯ ಪುರುಷರ ಕ್ರಿಕೆಟ್ ಪಂದ್ಯಾಟ- karavalivaninews


ಈ ಸುದ್ದಿ ನೀವು ಓದಲೇಬೇಕು(You have to wait 20 seconds.ಕಾಯಿರಿ)

ಈ ಸುದ್ದಿ ನೀವು ಓದಲೇಬೇಕು
ಬ್ರಹ್ಮಾವರ ಎಸ್.ಎಮ್.ಎಸ್ ಕಾಲೇಜು ಮೈದಾನದಲ್ಲಿ ಬಿ.ಸಿ ಆಳ್ವ ಮೆಮೋರಿಯಲ್ ರೋಲಿಂಗ್ ಟ್ರೋಫಿಗಾಗಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಟ್ಟದ ಅಂತರ್ ವಲಯ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಂ.ಎಸ್ ಪದವಿ ಕಾಲೇಜು ಬ್ರಹ್ಮಾವರ, ಎಂ.ಪಿ.ಎಂ ಪ್ರಥಮ ದರ್ಜೆ ಕಾಲೇಜು ಕಾರ್ಕಳ ತಂಡವನ್ನು 38 ರನ್ನುಗಳ ಅಂತರದಿಂದ ಮಣಿಸಿ 11 ವರ್ಷಗಳ ನಂತರ ಬಿ.ಸಿ ಆಳ್ವ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಎಂ.ಪಿ.ಎಂ ಪ್ರಥಮ ದರ್ಜೆ ಕಾಲೇಜು ಕಾರ್ಕಳ ತಂಡವು ಅತಿಥೇಯ ಎಸ್.ಎಂ.ಎಸ್ ತಂಡವನ್ನು 131ರನ್ನುಗಳಿಗೆ ನಿಯಂತ್ರಿಸಲು ಸಫಲವಾಯಿತಾದರೂ ಎಸ್.ಎಂ.ಎಸ್ ಕಾಲೇಜಿನ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 93 ರನ್ನುಗಳಿಗೆ ಆಲ್ ಔಟ್ ಆಯಿತು. ಎಂ.ಪಿ.ಎಂ ಕಾಲೇಜು ಪರ ಧೀರಜ್ ನಾಲ್ಕು ವಿಕೆಟ್ ಪಡೆದರೆ, ಎಸ್.ಎಂ.ಎಸ್ ಕಾಲೇಜಿನ ನಿತೀಶ್ ಶೆಟ್ಟಿ 3 ವಿಕೆಟ್ ಪಡೆದರು. ಇತ್ತಂಡಗಳು ಸೆಮಿ ಫೈನಲ್ ನಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರ್ ಮಂಗಳೂರು ಹಾಗೂ ಎಸ್.ಡಿ.ಎಮ್ ಕಾಲೇಜು, ಮಂಗಳೂರು ತಂಡಗಳನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದ್ದವು. ಇದರ ಜೊತೆಗೆ ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ತಂಡವು ಸತತ ಎರಡು ವರ್ಷ ಶಿರ್ವ ಲೆಸ್ಲಿ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಪಂದ್ಯಾ ಕೂಟದ ಸಮಾರೋಪ ಸಮಾರಂಭದಲ್ಲಿ ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಅಧ್ಯಕ್ಷರಾದ ರೆ.ಫಾ.ಎಮ್. ಸಿ ಮಥಾಯ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಸಿರಿಲ್ ಪಿ ಡಿ'ಸೋಜ, ಕೋಶಾಧಿಕಾರಿಯಾದ ಶ್ರೀ ಸ್ಯಾಂಸನ್ ಡಿ'ಸೋಜ, ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಮಿಟಿ ಸದಸ್ಯರಾದ ಶ್ರೀಮತಿ ಲವಿನಾ ಲೂವಿಸ್, ಎಸ್.ಎಮ್.ಎಸ್ ಸಿ ಬಿ ಎಸ್ ಇ ಶಾಲೆಯ ಮಾಜಿ ಕೋಶಧಿಕಾರಿಯಾದ ಶ್ರೀ ಅಲ್ವಿನ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ್ ಉಡುಪ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಏರನ್ ರೋಚ್ ಉಪಸ್ಥಿತರಿದ್ದರು.
 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close