Type Here to Get Search Results !

SHOCKING NEWS: ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದ ಪ್ರಿಯತಮ-karavalivani


@karavalivani, @ಕರಾವಳಿವಾಣಿ

ವದೆಹಲಿ: ದೆಹಲಿಯ ವ್ಯಕ್ತಿಯೋರ್ವ ತನ್ನ  ಸಂಗಾತಿಯ ಕೊಲೆಗೈದು ಆಕೆಯ ದೇಹವನ್ನು ಸರಿ  ಸುಮಾರು 35 ತುಂಡುಗಳನ್ನಾಗಿ ಕತ್ತರಿಸಿ, ಬಳಿಕ ದೇಹದ ಭಾಗಗಳನ್ನು 18 ದಿನಗಳ ಕಾಲ ಫ್ರೀಡ್ಜ್ ನಲ್ಲಿಟ್ಟು ಒಂದೊಂದೇ ಭಾಗಗಳನ್ನು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಬಿಸಾಕಿರುವ ಭಯಂಕರ ಘಟನೆ ಬೆಳಕಿಗೆ ಬಂದಿದೆ. 

ದೆಹಲಿಯಲ್ಲಿ ಇತೀಚೆಗೆ ನಡೆದಿದ್ದ ಶ್ರದ್ಧಾ ಎಂಬ 26 ವರ್ಷದ ಯುವತಿಯ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಆಕೆಯ ಪ್ರಿಯತಮ ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ತನ್ನ ಪ್ರಿಯತಮೆಯನ್ನು ಭೀಕರವಾಗಿ ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ವಿಕೃತಿ ಮೆರೆದಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಮುಂಬೈನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದ ಮುಂಬೈ ಮೂಲದ ಶ್ರದ್ಧಾ ಎಂಬ ಯುವತಿಗೆ ದೆಹಲಿ ಮೂಲದ ಅಫ್ತಾಬ್ ಪೂನಾವಾಲಾ ಪರಿಚಯವಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆದರೆ ಶ್ರದ್ಧಾ ಮನೆಯವರು ಈ ಸಂಬಂಧ ಒಪ್ಪಿರಲಿಲ್ಲ. ಇದರಿಂದ ಶ್ರದ್ಧಾ ಹಾಗೂ ಅಫ್ತಾಬ್ ದೆಹಲಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳಿಂದ ಶ್ರದ್ಧಾ ಆಕೆಯ ಕುಟುಂಬದವರ ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಯಾದ ಆಕೆಯ ತಂದೆ ವಿಕಾಸ್ ದೆಹಲಿಗೆ ಬಂದಿದ್ದಾರೆ. ಶ್ರದ್ಧಾ ವಾಸವಿದ್ದ ಫ್ಲಾಟ್ ಗೆ ಭೇಟಿ ನೀಡಿದಾಗ ಭಾಗಿಲು ಲಾಕ್ ಆಗಿತ್ತು. ಇದರಿಂದ ಮೆಹ್ರೌಲಿ ಠಾಣೆಯಲ್ಲಿ ಶ್ರದ್ಧಾ ತಂದೆ ಅಪಹರಣ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ರದ್ಧಾ ಪ್ರಿಯತಮ ಅಫ್ತಾಬ್ ನನ್ನು ಶನಿವಾರ ಬಂಧಿಸಿ ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಪಾಗಲ್ ಅಫ್ತಾಬ್ ನ ಪಾತಕ ಕೃತ್ಯ ಬಯಲಾಗಿದೆ. ಹಲವು ದಿನಗಳ ಹಿಂದೆಯೇ ಶ್ರದ್ಧಾಳನ್ನು ಕತ್ತುಹಿಸುಕಿ ಕೊಲೆಗೈದಿದ್ದ ಅಫ್ತಾಬ್ ಬಳಿಕ ಆಕೆಯ ದೇಹವನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿ 35 ಭಾಗಗಳನ್ನಾಗಿ ಮಾಡಿದ್ದ. ಆ ದೇಹದ ತುಂಡುಗಳನ್ನು ಇರಿಸಲು ದೊಡ್ಡ ಫ್ರಿಡ್ಜ್ ಖರೀದಿಸಿ ತಂದು ಅದನ್ನು 18 ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿದ್ದ. ನಂತರ ಪ್ರತಿದಿನ ಒಂದೊಂದೇ ದೇಹದ ತುಂಡುಗಳನ್ನು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಬಿಸಾಕಿದ್ದ ಎಂಬ ಘೋರ ಸತ್ಯ ಬಯಲಾಗಿದೆ. ಇದೀಗ ದೆಹಲಿ ಪೊಲೀಸರು ಶ್ರದ್ಧಾಳ ದೇಹದ ಭಾಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close