Type Here to Get Search Results !

ಇಂದು ಮಧ್ಯರಾತ್ರಿಯಿಂದ ನಂದಿನಿ ಹಾಲಿನ ದರ ಏರಿಕೆ -karavalivani


@karavalivani, @ಕರಾವಳಿವಾಣಿ

ಬೆಂಗಳೂರು : ದುಬಾರಿ ದುನಿಯಾದಲ್ಲಿ ಮತ್ತೆ ಜನ ಸಾಮಾನ್ಯನ ಮೇಲೆ ಬೆಲೆ ಏರಿಕೆ ಬರೆ ಬಿದ್ದಿದೆ. ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಕೆಎಂ ಎಫ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿ ಲೀಟರ್ ಹಾಲಿನ ದರದ ಮೇಲೆ 3 ರೂಪಾಯಿಯನ್ನು ಹೆಚ್ಚಿಸಲಾಗುವುದು.

ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬರಲಿದೆ.

DESTINY SHOCKING NEWS: ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದ ಪ್ರಿಯತಮ-

ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡಲಾಗಿದೆ. ಕೆಎಂ ಎಫ್ ಆಡಳಿತ ಮಂಡಳಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ನೂತನ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಹೆಚ್ಚಳವಾದ ಸಂಪೂರ್ಣ ದರವನ್ನು ರೈತರಿಗೆ ನೀಡಲಾಗುವುದು. ಈ ಮೂಲಕ ಹೈನುಗಾರಿಕೆ ಮಾಡುವ ರೈತರಿಗೆ ಬಂಪರ್ ಕೊಡುಗೆ ನೀಡಿದಂತಾಗಿದೆ.

2020ರ ಫೆಬ್ರವರಿಯಂದು ಕೊನೆಯ ಬಾರಿ ನಂದಿನಿ ಹಾಲಿನ ದರವನ್ನು ಏರಿಸಲಾಗಿತ್ತು. 2020ರಲ್ಲಿ ಪ್ರತಿ ಲೀಟರ್ ಗೆ 2ರೂ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿತ್ತು.

ಹಾಲು ಮೊಸರು ದರದಲ್ಲಿ ಬದಲಾವಣೆ :
- 37 ರಿಂದ 40
ಹೊಮೋಜಿನೈಸ್ಡ್ ಹಾಲು - 38 ರಿಂದ 41
ಹೊಮೊಜಿನೈಸ್ಡ್ ಹಸುವಿನ ಹಾಲು - 42 ರಿಂದ 45
ಸ್ಪೆಷಲ್ ಹಾಲು - 43 ರಿಂದ 46
ಶುಭಂ ಹಾಲು - 43 ರಿಂದ 46
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು - 44 ರಿಂದ 47
ಸಮೃದ್ಧಿ ಹಾಲು - 48 ರಿಂದ 51
ಸಂತೃಪ್ತಿ ಹಾಲು- 51 ರಿಂದ 53
ಡಬಲ್ ಟೋನ್ಡ್ ಹಾಲು - 36ರಿಂದ 39
ಮೊಸರು ಪ್ರತಿ ಕೆಜಿ - 45 ರಿಂದ 48

ನಂದಿನಿ ಸೇರಿದಂತೆ ಬೇರೆ ಬೇರೆ ಹಾಲುಗಳ ದರ ಹೀಗಿದೆ :

ನಂದಿನಿ - 37
ದೊಡ್ಲ- 44
ಜೆರ್ಸಿ - 44
ಹೆರಿಟೇಜ್ - 48
ತಿರುಮಲ - 48
ಗೋವರ್ಧನ್ - 49
ಆರೋಗ್ಯ - 50

ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿ ದರ ಹೀಗಿದೆ :
ಕರ್ನಾಟಕ - 37
ಆಂಧ್ರಪ್ರದೇಶ - 55
ತಮಿಳುನಾಡು- 40
ಕೇರಳ - 46
ಮಹಾರಾಷ್ಟ್ರ - 51
ದೆಹಲಿ - 51
ಗುಜರಾತ್- 50

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close