Type Here to Get Search Results !

ಹಂಗಾರಕಟ್ಟೆ- ಗ್ರಾಮೀಣ ಸೊಗಡನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿದ ಶಿಕ್ಷಕರು! ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ವಿಶೇಷತೆ-karavalivani

@karavalivani, @ಕರಾವಳಿವಾಣಿ


ಕೋಟ: ಇಲ್ಲಿನ ಐರೋಡಿ ಗ್ರಾ.ಪಂ ವ್ಯಾಪ್ತಿಯ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ವಿಶೇಷವಾಗಿ ಗ್ರಾಮೀಣ ಸೊಗಡುಗಳ ಕ್ರೀಡಾಕೂಟ ಏರ್ಪಡಿಸಿ ಮಕ್ಕಳಿಗೆ ಅದರ ಸವಿ ಉಣಬಡಿಸಿದರು.
ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ರೀತಿಯ ಸಭೆ ಸಮಾರಂಭಗಳನ್ನು ಆಯೋಜಿಸುವುದು ಕಾಣಬಹುದು 

ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಪೂರ್ವಾಹ್ನದಿಂದಲೇ ಶಾಲಾ ಮೈದಾನದಲ್ಲಿ ವಿವಿಧ ಬಗೆಗೆ ಮರೆಯಾಗುತ್ತಿರುವ ಕ್ರೀಡೆಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರದರ್ಶನಗೊಳಿಸಿದರು.ಇದರಲ್ಲಿ ಬಹುಮುಖ್ಯವಾಗಿ ಗ್ರಾಮೀಣ 

 ಕ್ರೀಡೆಗಳಾದ ಚೆನ್ನೆ ಮನೆ ,ಚಿನ್ನಿದಾಂಡು, ಲಗೋರಿ, ಹುಲಿ ದನ ಟೊಪ್ಪಿ ಬೇಕೆ ಟೋಪಿ ,ಕುಂಟೆಬಿಲ್ಲೆ, ಗುಡ್ನಾ ಹಾಗೂ ಇನ್ನಿತರ ಆಟಗಳು ಮಕ್ಕಳನ್ನು ಪುಳಕಿತಗೊಳಿಸಿತು.

 ಕಾರ್ಯಕ್ರಮವನ್ನು ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಚಿಣಿದಾಂಡು ಆಡುವ ಮೂಲಕ ಉದ್ಘಾಟಿಸಿದರು.
 ಬ್ರಹ್ಮಾವರ ಬಿ ಆರ್ ಪಿ ಲಕ್ಷಿ÷್ಮ, ಹಂಗಾರಕಟ್ಟೆ ಸಿಆರ್ ಪಿ ಅನುಪಮಾ, ಪ್ರೇರಣ ಜಿಲ್ಲಾ ಸಂಯೋಜಕಿ ದೀಪಿಕಾ ಹೆಗಡೆ,
 ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಡೆನ್ನಿಸ್ ಡಿಸೋಜಾ , ಶಾಲಾ ಮುಖ್ಯ ಶಿಕ್ಷಕಿ ಸೇಸು ,ಸಹಶಿಕ್ಷಕಿ ಪ್ರೆಸಿಲ್ಲಾ 
ಉಷಾರಾಣಿ ಸಹಶಿಕ್ಷಕಿಯರಾದ ವೀಣಾ,ಯಶೋಧ, ಗೌರವ ಶಿಕ್ಷಕಿ ರಮ್ಯ ಮತ್ತಿತರರು ಉಪಸ್ಥಿತರಿದ್ದರು.



ಪ್ರತಿಕ್ಷ ಆರನೇ ತರಗತಿ

ಈ ದಿನ ನಮ್ಮ ಶಾಲೆಯಲ್ಲಿ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಇದರಲ್ಲಿ ನನಗೆ ಗೊತ್ತಿಲ್ಲದ ಕೆಲವೊಂದು ಆಟಗಳ ಪರಿಚಯವಾಯಿತು ವಿದ್ಯಾರ್ಥಿಗಳೇ ಆಟಗಳ ಕುರಿತಾಗಿ ತಮ್ಮ ಹಿರಿಯವರಲ್ಲಿ ಅಜ್ಜಿಯಲ್ಲಿ ಅಜ್ಜಿನಲ್ಲಿ ಕೇಳಿಕೊಂಡು ಬಂದು ಆಟದ ನಿಯಮವನ್ನು ವಿದ್ಯಾರ್ಥಿಗಳೇ ಹೇಳಿರುವುದರಿಂದ ನಮಗೆ ಮರೆಯದ ಆಟಗಳ ಪರಿಚಯ ಆಯಿತು. ಶಿಕ್ಷಕರು ನಮಗೆ ಪ್ರತಿಯೊಬ್ಬರಿಗೂ ಒಂದೊAದು ಆಟದ ಪರಿಚಯದ ಬಗ್ಗೆ ಹೇಳಲು ತಿಳಿಸಿದ್ದರು. ತುಂಬಾ ಉತ್ತಮ ರೀತಿಯಲ್ಲಿ ನಮ್ಮ ಮಕ್ಕಳ ದಿನಾಚರಣೆಯ ಅರ್ಥಪೂರ್ಣವಾಗಿ ಆಚರಿಸಿದಂತ ಅನುಭವ ನಮಗಾಯಿತು




ವೀಣಾ ಸಹಶಿಕ್ಷಕಿ 
ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ದೃಷ್ಟಿಯಲ್ಲಿ ಸಾಂಪ್ರದಾಯಿಕ ಆಟಗಳ ಪರಿಚಯ ,ಅದರ ನಿಯಮಗಳನ್ನ ನಮ್ಮ ಹಿರಿಯವರಲ್ಲಿ ತಿಳಿದುಕೊಂಡು ವಿದ್ಯಾರ್ಥಿಗಳಿಗೆ ನೀಡಿದ್ದು ಅವರೆಲ್ಲರೂ ತುಂಬಾ ಉತ್ಸಾಹದಿಂದ ಪ್ರದರ್ಶನವನ್ನು ನೀಡಿದರು. ಈಗಿನ ವಿದ್ಯಾರ್ಥಿಗಳಲ್ಲಿ ಹಿಂದಿನ ಒಂದು ಆಟಗಳ ಹೆಸರನ್ನೇ ಕೇಳದೆ ಇರುವಂತಹ ಪರಿಸ್ಥಿತಿಯಲ್ಲಿ ಇಂತಹ ಆಟಗಳ ಒಂದು ಪರಿಚಯವನ್ನು ಮಾಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಆಟಗಳ ಯಾವುವು ಮತ್ತು ಅವುಗಳಿಂದ ನಮಗಾಗುವ ಪ್ರಯೋಜನಗಳೇನು? ಮತ್ತೆ ಹಿಂದಿನವರು ಯಾಕಾಗಿ ಈ ಆಟಗಳನ್ನು ಆಡುತ್ತಿದ್ದರು ಎನ್ನುವ ಕುರಿತು ತಿಳಿಯಪಡಿಸಲಾಯಿತು.
ಈ ತರಹದ ಆಟಗಳು ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಉತ್ತಮವಾದ ಆಟಗಳಾಗಿದ್ದವು. ಆದರೆ ಈಗ ಅದು ಮರೆಯಾಗುತ್ತಿರುವುದರಿಂದ ಇಂದಿನ ಮಕ್ಕಳ ಮುಂದಿನ ಪ್ರಜೆಗಳಾಗಿರುವುದರಿಂದ ಅವರಿಗೆ ಅದರ ಕುರಿತಾಗಿ ಅರಿವು ಮೂಡಿಸುವ ಒಂದು ಸಣ್ಣ ಪ್ರಯತ್ನವನ್ನು ನಾವು ಮಾಡಿರುತ್ತೇವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close