ಬ್ರಹ್ಮಾವರ: ರೋಸ್ ಸಮಾರಂಭದಲ್ಲಿ ಕುಸಿದು ಬಿದ್ದು ಯುವತಿ ಮೃತಪಟ್ಟ ಘಟನೆ ಹಾವಂಜೆಯಲ್ಲಿ ನಡೆದಿದೆ. ಮೂಲತಃ ಬಸ್ರೂರಿನ ಪ್ರಸ್ತುತ ಹಾವಂಜೆಯ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದ ಜೋಸ್ನಾ ಮರಿಯಾ ಕೊತಾ(23) ಮೃತಪಟ್ಟವರು. ಅವರು ಬುಧವಾರ ರಾತ್ರಿ ಮನೆಯಲ್ಲಿ ರೋಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರು ತಂದೆ ಜೋರ್ಜ್ ಕೋತಾ, ತಾಯಿ ಐರಿನ್ ಕೋತಾ ಹಾಗೂ ಸಹೋದರನನ್ನು ಅಗಲಿದ್ದಾರೆ. ಅವರು ಎಂ.ಕಾಂ. ಪದವಿ ಮುಗಿಸಿದ್ದರು.