Type Here to Get Search Results !

delete

ಎಸ್ ಎಮ್.ಎಸ್. ಕಾಲೇಜು ಬ್ರಹ್ಮಾವರದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ -Karavalivani


@karavalivani, @ಕರಾವಳಿವಾಣಿ
ಎಸ್ ಎಮ್.ಎಸ್. ಕಾಲೇಜು ಬ್ರಹ್ಮಾವರದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 23.11.2022 ರಂದು ಕಾಲೇಜಿನ ಡಾ. ಬಿ.ವಿ.ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಕಾಲೇಜಿನ ಸಂಚಾಲಕರಾದ ರೆ.ಫಾ. ಎಮ್.ಸಿ. ಮಥೈ ಇವರು ಸಮಾರಂಭದ

ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟಕರಾಗಿ ಆಗಮಿಸಿದ ಎಸ್.ಡಿ.ಪಿ.ಟಿ ಕಾಲೇಜು ಮಂದಾರ್ತಿಯ ಹಿಂದಿ ಉಪನ್ಯಾಸಕಿಯಾದ ಶ್ರೀಮತಿ ರೇಷ್ಮಾ ಶೆಟ್ಟಿ ಇವರು ದೀಪ ಬೆಳಗಿಸಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಸಂಘದೊಂದಿಗೆ ಕ್ರಿಯಾಶೀಲರಾಗಿ ದುಡಿದ ನೆನಪುಗಳನ್ನು
ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮಸ್ಠೈರ್ಯವನ್ನು ಹೆಚ್ಚಿಸುವಲ್ಲಿ ವಿದ್ಯಾರ್ಥಿಸಂಘದ ಪಾತ್ರ ಮಹತ್ವದ್ದಾಗಿದೆ ಎಂದು ನುಡಿದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಡಾ. ಮಂಜುನಾಥ್ ಉಡುಪ, ಕಾಲೇಜಿನ ಪ್ರಾಂಶುಪಾಲರಾದ  ಪ್ರಸನ್ನ ಶೆಟ್ಟಿ, ಉಪಪ್ರಾಂಶುಪಾಲರಾದ ಡಾ. ವಿದ್ಯಾಲತಾ, ವಿದ್ಯಾರ್ಥಿಸಂಘದ ನಾಯಕನಾದ ದಿವ್ಯಾಂಶ್, ಕಾರ್ಯದರ್ಶಿ ಆರಾಧ್ಯ ಕೃಷ್ಣ, ಉಪನಾಯಕನಾದ ನವನೀತ್, ಉಪನಾಯಕಿಯಾದ ಪ್ರೀತಿ, ಜೊತೆಕಾರ್ಯದರ್ಶಿಯಾದ ಅವನೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧರಿತ್ರಿ ಹಾಗೂ ಸಿಂಚನಾ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close