Type Here to Get Search Results !

ಸಿಮ್ SIM ಕಾರ್ಡ್ ತುದಿ ಯಾಕೆ ಕಟ್ ಮಾಡಿರುತ್ತಾರೆ ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯಿರಿ


ನಾವು ನೀವೆಲ್ಲ ಎಷ್ಟೋ ಸಮಯದಿಂದ ಮೊಬೈಲ್ ಫೋನ್ ಯೂಸ್ ಮಾಡ್ತಾ ಇದ್ದೇವೆ ಅದೆಷ್ಟು ಸಿಮ್ ಕಾರ್ಡ್ಗಳನ್ನ ಚೇಂಜ್ ಮಾಡ್ತಾ ಇರುತ್ತೇವೆ ಹೀಗೆ ಉಪಯೋಗಿಸುತ್ತಿರುವಾಗ ಸಿಮ್ ಕಾರ್ಡ್ ತುದಿ ಯಾಕೆ ಕತ್ತರಿಸಲ್ಪಟ್ಟಿರುತ್ತದೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆಯಾ, ಸಿಕ್ಕಿಲ್ಲದಿದ್ದರೆ ನಾವು ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇವೆ ಬನ್ನಿ 
 ಸ್ಮಾರ್ಟ್ಫೋನ್ ಅಥವಾ ಫೀಚರ್ ಫೋನ್ ಆಗಿರಲಿ ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಬಳಿಯೂ ಈ ಫೋನ್ಗಳಿರುತ್ತವೆ. ಯಾರ ಬಳಿ ಫೋನ್ ಇದೆಯೋ ಅವರು ಸಿಮ್ ಬಗ್ಗೆ ತಿಳಿದಿರುತ್ತಾರೆ. 

ನಾವು ಇಲ್ಲಿಯವರೆಗೆ ನೋಡಿದ ಎಲ್ಲಾ ಸಿಮ್ ಕಾರ್ಡ್ಗಳಲ್ಲಿ ಒಂದು ಸಾಮಾನ್ಯ ಅಂಶವಿದೆ. ಅದನ್ನು ನಾವೆಲ್ಲರೂ ಗಮನಿಸಬೇಕು. ಪ್ರತಿ ಸಿಮ್ನ ಒಂದು ಮೂಲೆಯನ್ನು ಸ್ವಲ್ಪ ಕತ್ತರಿಸಲಾಗುತ್ತದೆ. ಇದು ಏಕೆ  ಎಂದು ನಿಮಗೆ ತಿಳಿದಿದೆಯೇ?

ಸಿಮ್ ಕೋನದಲ್ಲಿ ಕಟ್ ಆಗಿರಲು ಕಾರಣವೇನು?

ಸಿಮ್ನ ಒಂದು ಬದಿಯನ್ನು ಈ ರೀತಿ ಏಕೆ ಕತ್ತರಿಸಲಾಗುತ್ತದೆ ಎಂದು ನಮ್ಮಲ್ಲಿ ಕೆಲವೇ ಕೆಲವರಿಗೆ ತಿಳಿದಿರುತ್ತದೆ. ಹೀಗೇಕೆ ಹೀಗಾಗುತ್ತದೆ ಎಂದು ಈಗ ನೀವು ಯೋಚಿಸುತ್ತಿದ್ದರೆ ಸಿಮ್  ಒಂದು ಮೂಲೆಯನ್ನು ಕತ್ತರಿಸಲಾಗಿರುತ್ತದೆ  ಎಂದರೆ   ಇದರಿಂದ ಮೊಬೈಲ್ ಫೋನ್ನಲ್ಲಿ ಸಿಮ್ ಅನ್ನು ಸರಿಯಾದ ಸ್ಥಿತಿ ಯಲ್ಲಿ   ಇರಿಸಬಹುದು. ಸಿಮ್ ತಲೆಕೆಳಗಾಗಿದೆಯೇ ಅಥವಾ ನೇರವಾಗಿ ಇದೆಯೇ ಎಂದು ಗುರುತಿಸಲು ಸಿಮ್ ವಿನ್ಯಾಸವನ್ನು ಆ  ರೀತಿಯಲ್ಲಿ ಮಾಡಲಾಗಿದೆ. ಜನರು ಸಿಮ್ ಅನ್ನು ತಲೆಕೆಳಗಾಗಿ ಹಾಕಿದರೆ ಅದರ ಚಿಪ್ಗೆ ಹಾನಿಯಾಗುವ ಅಪಾಯವಿದೆ. ಮತ್ತು  ನೆಟವರ್ಕ್  ಸಹ ತೋರಿಸುವುದಿಲ್ಲ  ನಮ್ಮೆಲ್ಲರಿಗೂ ಸಿಮ್ ಹಾಕಲು  ಉಪಯೋಗ  ಆಗಲಿ ಅಂತ  ಹಾಗೆ ಕಟ್ ಮಾಡಿರುತಾರೆ 


ಸಿಮ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?

SIM ನ ಪೂರ್ಣ ರೂಪ ಚಂದಾದಾರರ (S) ಗುರುತು (I) ಮಾಡ್ಯೂಲ್ (M) ಎಂದು ವಿವರಿಸಬವುದು. ಈ ಕಾರ್ಡ್ ಆಪರೇಟಿಂಗ್ ಸಿಸ್ಟಮ್ (COS) ಚಾಲನೆಯಲ್ಲಿರುವ ಇಂಟಿಗ್ರೇಟೆಡ್ ಸರ್ಕ್ಯೂಟ್ ಆಗಿದ್ದು ಇದು ಇಂಟರ್ನ್ಯಾಷನಲ್ ಮೊಬೈಲ್ ಗ್ರಾಹಕ ಗುರುತಿಸುವಿಕೆ (IMSI) ಸಂಖ್ಯೆ ಮತ್ತು ಅದರ ಸಂಬಂಧಿತ ಕೀಲಿಯನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸುತ್ತದೆ. ಮೊಬೈಲ್ ಟೆಲಿಫೋನಿ ಫೋನ್ಗಳಲ್ಲಿ (ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ಗಳಂತಹ) ಗ್ರಾಹಕರನ್ನು ಗುರುತಿಸಲು ಮತ್ತು ದೃಢೀಕರಿಸಲು ಈ ಸಂಖ್ಯೆ ಮತ್ತು ಕೀಲಿಯನ್ನು ಬಳಸಲಾಗುತ್ತದೆ. ಮೊಬೈಲ್ ಫೋನ್ಗಳಲ್ಲಿ ಬಳಸುವ SIM ಕಾರ್ಡ್ನ ಅಗಲ 25mm ಉದ್ದ 15mm ಮತ್ತು ದಪ್ಪ 0.76mm ಆಗಿರುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close