@karavalivani, @ಕರಾವಳಿವಾಣಿ
ನಾವು ನೀವು ಎಲ್ಲರೂ ಫೋನನ್ನು ಎಷ್ಟು ಬಳಕೆ ಮಾಡುತ್ತಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿರುವಂತ ವಿಷಯ ಆದರೆ ಫೋನ್ ಅಂದ್ರೆ ಥಟ್ಟ ನಮಗೆ ನೆನಪಿಗೆ ಬರದು, ನೋಕಿಯಾ ಮೊದಲಂತೂ ಎಲ್ಲರ ಮನೆಯಲ್ಲೂ ನೋಕಿಯಾ ಫೋನ್ದೆ ದರ್ಬಾರ್ ಏಕೆಂದರೆ ನೋಕಿಯಾ ಫೋನ್ ಬಂದಾಗ ಅದರ ವೈಶಿಷ್ಟ್ಯತೆ ಎಲ್ಲರ ಗಮನ ಸೆಳೆದಿದ್ದು ಮತ್ತು ಅದರ ಗುಣಮಟ್ಟ ಕೂಡ ಅತ್ಯುತ್ತಮವಾಗಿತ್ತು ಅಷ್ಟು ಸದ್ದು ಮಾಡಿದ್ದ ನೋಕಿಯಾ ಮೊಬೈಲ್ ಮರೆಯಾಗುವ ಹೊತ್ತಲ್ಲಿ ನಿಮ್ಮೆಲ್ಲರಿಗೂ ಒಂದು ಗುಡ್ ನ್ಯೂಸ್ ಅನ್ನು ನೋಕಿಯಾ ತರುತ್ತದೆ ಅದೇನಂದರೆ . ಇದೀಗ ಅಂಥಹದ್ದೇ ನೋಕಿಯಾ ವರ್ಷನ್ ಒಂದು ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
click here-79 ವಯಸ್ಸಿನಲ್ಲೂ ನೇತ್ರದಾನದ ಗೈದು ಸಾಮಾಜಿಕ ಪ್ರಜ್ಞೆ ಮೆರೆದ
ನೋಕಿಯಾದ ಹೊಸ 4ಜಿ ಫೀಚರ್ ನ ಮೊಬೈಲ್ ಒಂದು ಬಿಡುಗಡೆಯಾಗಿದೆ. ಐಕಾನಿಕ್ ಮ್ಯೂಸಿಕ್ ಪ್ಲೇಯರ್ ಆಗಿದ್ದ 5710 ಇದೀಗ ಹೊಸ ರೂಪ ಹಾಗೂ ಫೀಚರ್ ನೊಂದಿಗೆ ಬಂದಿದೆ. ಸಂಗೀತ ಪ್ರಿಯರಿಗಾಗಿಯೇ ಈ ಮೊಬೈಲ್ ಬಂದಿರೋದು ಎಂದು ಹೇಳಲಾಗುತ್ತಿದೆ. ಇದು ಸೆ.19 ರಿಂದ ಆನ್ ಲೈನ್ ಹಾಗೂ ಮಳಿಗೆಗಳಲ್ಲಿ ಸಿಗಲಿದೆ.
ಇನ್ನು ಈ ಮೊಬೈಲ್ ನ ವಿನ್ಯಾಸ ನೋಡೋದಾದ್ರೆ, ಇದು ಹಳೆಯ ಮಾದರಿಯ ಕೀಪ್ಯಾಡ್ ರೀತಿ ಇದೆ. ಜೊತೆಗೆ ವೈರ್ ಲೆಸ್ ಸ್ಟಿರಿಯೋ ಇಯರ್ ಬಡ್ ಕೂಡ ಇದರಲ್ಲಿ ಇರಲಿದೆ. ಇದನ್ನು ಮೊಬೈಲ್ ನಲ್ಲಿಯೇ ಇಡಬಹುದಾದ ಅನುಕೂಲ ಮಾಡಿದ್ದಾರೆ. ಈ ಇಯರ್ ಬಡ್ ಅನ್ನು ಮೊಬೈಲ್ ನ ಹಿಂಬದಿ ಇಟ್ಟುಕೊಳ್ಳಲು ಜಾಗ ಇದೆ. 1450 ಎಮ್ ಎಚ್ ಬ್ಯಾಟರಿ ಅಳವಡಿಕೆ ಇದೆ. ಬಿಳಿ, ಕೆಂಪು, ಕಪ್ಪು ಬಣ್ಣದಲ್ಲಿ ಈ ಮೊಬೈಲ್ ಸಿಗಲಿದೆ. ಇನ್ನು ಈ ಮೊಬೈಲ್ ನ ದರ ಕೂಡ ಕೈಗೆಟಕುವಂತೆಯೇ ಇದೆ. ಕೇವಲ 4,999 ರೂ. ಗಳಿಗೆ ಈ ಮೊಬೈಲ್ ಲಭ್ಯವಾಗಲಿದೆ.