Type Here to Get Search Results !

ಮೆಸ್ಕಾಂ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಸಾರ್ವಜನಿಕರ ಅಭಿನಂದನೆ-Karavalivani


@karavalivani, @ಕರಾವಳಿವಾಣಿ
 
ಕೋಟ: ಕೋಟ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೆಸ್ಕಾಂ ಸಮಸ್ಯೆಗಳ ಕುರಿತಂತೆ ಜನಸಾಮಾನ್ಯರ ಸಮಸ್ಯೆಗಳ ಆಲಿಸುವ ಉದ್ದೇಶದಿಂದ ಮೆಸ್ಕಾಂ ಜನಸಂಪರ್ಕ ಸಭೆಯನ್ನು ಮಂಗಳವಾರ ಆಯೋಜಿಸಿತು.
ಸಭೆ ಆರಂಭಗೊಳ್ಳುತ್ತಿದ್ದoತೆ ಕೋಟ,ಕೋಟತಟ್ಟು ಗ್ರಾಮಪಂಚಾಯತ್  ವ್ಯಾಪ್ತಿಯಲ್ಲಿ ಮೆಸ್ಕಾಂ ಸಂಬoಧಿಕ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರಕಿದೆ ಇದಕ್ಕೆ ಎರಡು ಪಂಚಾಯತ್ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದವು.

ಇನ್ನುಳಿದಂತೆ ಸಾಲಿಗ್ರಾಮ ಒಳ ಪೇಟೆಯಲ್ಲಿ ಬಟ್ಟೆ ಮಳಿಗೆ ಎದುರು ಟ್ರಾನ್ಸ್  ಫಾರಂ ಅಳವಡಿಕೆ ಕುರಿತಂತೆ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಗಮನ ಸೆಳೆದರು.ಎರಡು ಮೂರು ಬಾರಿ ಜನಸಂಪರ್ಕಸಭೆಯಲ್ಲಿ ಈ ವಿಚಾರ ಚರ್ಚಿಸಿದ್ದೇನೆ ಸಮಸ್ಯೆ ಬಗೆಹರಿಸಿಲ್ಲ ಇನ್ನಾದರೂ ಶೀಘ್ರದಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿ ಅಲ್ಲದೆ ಒಳಪೇಟೆಯಲ್ಲಿ ಹಳೆಯ ಕಂಬಗಳಿಗೆ ಮುಕ್ತಿದೊರಕಿಸಿ ಹೊಸ ಕಂಬಗಳ ಅಳವಡಿಕೆ ಪ್ರಸ್ತಾಪಿಸಿದರು.ಈ ಬಗ್ಗೆ ಮೆಸ್ಕಾಂ ಕುಂದಾಪುರ ಕಾರ್ಯನಿರ್ವಾಹಕ ಇಂಜಿನಿಯರ್ ರಾಕೇಶ್ ಕುಮಾರ್ ಈ ಎರಡು ಸಮಸ್ಯೆಗಳನ್ನು ಶೀಘ್ರದಲ್ಲೆ ಬಗೆಹರಿಸಲಾಗುವುದು ಎಂದರು.
ಕೋಟ ಮೆಸ್ಕಾಂ ನಲ್ಲಿ ರಾತ್ರಿ ವೇಳೆ ಕಾರ್ಯನಿರ್ವಹಿಸುವವರು ಯಾರು ಇಲ್ಲವೇ ಎಂದು ಕೋ.ಗಿನಾ ಪ್ರಶ್ನಿಸಿದರು.ಈ ಕುರಿತಂತೆ ರಾತ್ರಿ ಸಿಬ್ಬಂದಿ ಕಛೇರಿಯಲ್ಲೆ ಉಳಿಸಿಕೊಳ್ಳಲು ರಾಕೇಶ್ ಸೂಚಿಸಿದರು.
ಕೋಡಿ ಗ್ರಾ.ಪಂ ಸೇರಿದಂತೆ ವಿವಿಧ ಭಾಗಗಳಲ್ಲಿ ಹಳೆ ಮೀಟರ್ ಕೆಟ್ಟುಹೋಗಿದ್ದು ಅದನ್ನು ಬದಲಾದಲಾಯಿದೆ,ಒಮ್ಮೆ ಗರಿಷ್ಠ ಬೀಲ್ ನ್ನು ಕಾಯಂ ಗೊಳಿಸುತ್ತಿದ್ದಾರೆ ಇದು ಸರಿಯಲ್ಲ ಆದಷ್ಟು ಬೇಗ ಹೊಸ ಮೀಟರ್ ಅಳವಡಿಸಲು ಹಾಗೂ ಸರಕಾರ ಬೆಳಕು ಯೋಜನೆಯನ್ನು ಕರಾರುವಕ್ಕಾಗಿ ಅನುಷ್ಟಾನಗೊಳಿಸಲು ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಆಗ್ರಹಿದರು.
ಈ ಬಗ್ಗೆ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಪಾoಡೇಶ್ವರ ಶಂಕರನಾರಾಯಣ ದೇವಳದ ವಠಾರದಲ್ಲಿ ಹೆಚ್ಚು ಕಂಬಗಳನ್ನು ಅಳವಡಿಸಲಾಗಿದೆ ಇದು ದೇವಳಗಳ ಅಭಿವೃದ್ಧಿ ಮಾರಕ ಎಂದು ಪ್ರಶಾಂತ್ ಶೆಟ್ಟಿ ಪಾಂಡೇಶ್ವರ ಆಗ್ರಹಿಸಿದರು. ಈ ಬಗ್ಗೆ ಅಳವಡಿಸಿರುವ ತರಾಟೆ ತೆಗೆದುಕೊಂಡ ಘಟನೆ ಕೂಡಾ ಸಂಭವಿಸಿತು.
ಸಾಸ್ತಾನ ಮೆಸ್ಕಾಂ ಶಾಖೆಯಲ್ಲಿ ಅದೆಷ್ಟೊ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಬೇರೆಡೆ ವರ್ಗಾವಣೆಗೊಂಡಿದೆ ಆದರೂ ಇಲ್ಲೆ ಕಾರ್ಯನಿರ್ವಹಿಸುತ್ತಿರುವುದು ಎಷ್ಟು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಐರೋಡಿ ಪ್ರಶ್ನಿಸಿದರು.ಈ ಬಗ್ಗೆ ಗಮನ ಹರಿಸಿ ಬೇರೆಡೆ ವರ್ಗಾಯಿಸುವ ಕುರಿತಂತೆ ಭರವಸೆ ನೀಡಿದರು. ಸಹಾಯಕ ಕಾರ್ಯನಿರ್ವಾಹ ಇಂಜಿನಿಯರ್ ಪ್ರತಾಪಶ್ಚಂದ್ರ ಶೆಟ್ಟಿ, ಮೆಸ್ಕಾಂ ಕೋಟಾ ಉಪ ವಿಭಾಗ ಸಹಾಯಕ ಲೆಕ್ಕಾಧಿಕಾರಿ ಸಂತೋಷ್ , ಕೋಟ ಶಾಖಾಧಿಕಾರಿ ಪ್ರಶಾಂತ್ ಶೆಟ್ಟಿ ,ಸಾಸ್ತಾನ ಶಾಖಾಧಿಕಾರಿ ಮಹೇಶ್, ಶಿರಿಯಾರ ಶಾಖಾಧಿಕಾರಿ ವೈಭವ್ ಶೆಟ್ಟಿ ಉಪಸ್ಥಿತರಿದ್ದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close