Type Here to Get Search Results !

ಕುಂದಾಪುರ ಪೊಲೀಸ್ ಠಾಣೆ ವತಿಯಿಂದ ಕುಂದಾಪುರ ತಾಲ್ಲೂಕಿನ ವಕ್ವಾಡಿಯ ಗ್ರಾಮಸ್ಥರಿಗಾಗಿ ಜನ ಸ೦ಪಕ೯ ಸಭೆ -Karavalivani

 ಈ ಸುದ್ದಿ ಓದಲು ಕ್ಲಿಕ್ ಮಾಡಿ@karavalivani, @ಕರಾವಳಿವಾಣಿ
ಕುಂದಾಪುರ ಪೊಲೀಸ್ ಠಾಣೆ ವತಿಯಿಂದ ಕುಂದಾಪುರ ತಾಲ್ಲೂಕಿನ ವಕ್ವಾಡಿಯ ಗ್ರಾಮಸ್ಥರಿಗಾಗಿ ಜನ ಸ೦ಪಕ೯ ಸಭೆ ಕುಂದಾಪುರ ಠಾಣಾಧಿಕಾರಿ ಸದಾಶಿವ್ ಗೌರೋಜಿ ನೆರವೇರಿಸಿದರು.

ಸಭೆಯಲ್ಲಿ ಮಾತನಾಡಿದ ಅವರು "ಸುತ್ತಮುತ್ತಲು ನಡೆಯುತ್ತಿರುವ ಅಪರಾಧದ ವಿಚಾರಗಳ ಬಗ್ಗೆ ಸಾರ್ವಜನಿಕರು ಯಾವುದೇ ಭಯ ಪಡದೆ ಠಾಣೆಗೆ ತಿಳಿಸಿ ದಲ್ಲಿ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅವಘಡಗಳು ಅಪರಾಧಗಳು ನಡೆದ ಸಂದರ್ಭದಲ್ಲಿ  112 ಕರೆ ಮಾಡಿದಲ್ಲಿ ಕ್ಲಪ್ತ ಸಮಯಕ್ಕೆ ಇಲಾಖೆ ಹಾಜರಿದ್ದು ಸೇವೆಗೆ ಸಿದ್ಧವಿರುತ್ತದೆ ಎಂಬುದಾಗಿ ತಿಳಿಸಿದರು. ಪ್ರತಿ ಗ್ರಾಮಗಳಲ್ಲಿಯೂ  ಮಪ್ತಿಯಲ್ಲಿ ಹಾಗೂ ಬೀಟ್ ಪೊಲೀಸ್ ಸಂಚರಿಸುತ್ತಿದ್ದು ಅಪರಾಧದ ನಿಯಂತ್ರಣಕ್ಕಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂಬುದಾಗಿ ಮನವಿಯನ್ನು ಮಾಡಿದರು". ಗಾಂಜಾ ಸೇವನೆಯ ಕುರಿತಾಗಿ  ಮಾಹಿತಿ ಇದ್ದಲ್ಲಿ ಅದನ್ನು ದಯವಿಟ್ಟು ಸ್ಥಳೀಯ ಠಾಣೆಗಳಿಗೆ ತಿಳಿಸತಕ್ಕದ್ದು ಎಂದವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಮಾತುಕತೆ ನಡೆಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಳೀಯರಾದ ಗಿರೀಶ್ ಐತಾಳ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ , ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ,ಕೋಟಿ ನಾರಯಣ, ಪೋಲಿಸ್ ಸಿಬ್ಬಂದಿ ಗಣೇಶ್ ಸಾಲಿಕೇರಿ  ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close