Type Here to Get Search Results !

ಹಣದ ವ್ಯಾಮೋಹದ ಕಲಾವಿದ ಬೆಳೆಯಲಾರ, ಉಳಿಯಲಾರ: ಪ್ರಾಚಾರ್ಯ ಕೆ.ಪಿ. ಹೆಗಡೆ-Karavalivani


@karavalivani, @ಕರಾವಳಿವಾಣಿ

ಕೋಟ: ಅವಕಾಶಗಳನ್ನು ಹುಡುಕಿ ಮುನ್ನುಗ್ಗಬೇಕು ಕಲಾವಿದ. ಆಗಲೇ ಕಲೆಯು ಇನ್ನಷ್ಟು ಗಟ್ಟಿಯಾಗುತ್ತದೆ. ಕಲಾರಾಧಕ ಕಲಾವಿದ ತನ್ನೊಳಗಿನ ಕಲೆಯನ್ನು ಪ್ರದರ್ಶಿಸುವುದಕ್ಕೆ ಕಾತರನಾಗಿರುತ್ತಾನೆ. ಹಣದ ಹಿಂದೆ ಬೀಳುವ ಕಲಾವಿದ ಬೆಳೆಯಲು ಉಳಿಯಲು ಸಾಧ್ಯವಿಲ್ಲ. ಕಲೆಯನ್ನು ಕಲಾವಿದ ಪ್ರೀತಿಸಿದರೆ ಕಲೆಯು ಕಲಾವಿದನನ್ನು ಅಪ್ಪಿಕೊಳ್ಳುತ್ತದೆ. ಅಪೂರ್ವ ಮೆಲೋಡೀಸ್ ತೆಕ್ಕಟ್ಟೆ ತಂಡ ಕಲೆಯನ್ನು, ಸಂಘಟನೆಯನ್ನು ಗೌರವಿಸುತ್ತದೆ. ಆ ಕಾರಣಕ್ಕೆ ಇವರಿಗೆ ಉಜ್ವಲ ಭವಿಷ್ಯವಿದೆ ಎಂದು ಪ್ರಾಚಾರ್ಯ ಕೆ.ಪಿ. ಹೆಗಡೆ ಅಭಿಪ್ರಾಯ ಪಟ್ಟರು.
ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಸೆ.15ರಂದು, ತೆಕ್ಕಟ್ಟೆ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ಆಯೋಜಿಸಿದ ‘ಭಕ್ತಿ ರಸಮಂಜರಿ’ ಕಾರ್ಯಕ್ರಮದಲ್ಲಿ ಅಪೂರ್ವ ಮೆಲೋಡೀಸ್ ತೆಕ್ಕಟ್ಟೆ ತಂಡದ ಮುಖ್ಯಸ್ಥ ಉಮೇಶ್ ಮಲ್ಯಾಡಿಯವರನ್ನು ಗೌರವಿಸಿ ಪ್ರಾಚಾರ್ಯರು ಮಾತನ್ನಾಡಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ವಿಜಯ್ ಪಡುಕರೆ, ಮಾದವ ಬೀಜಾಡಿ, ಜನಾರ್ಧನ ಕುಂಭಾಶಿ, ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಭಕ್ತಿ ರಸಮಂಜರಿ ಕಾರ್ಯಕ್ರಮ ರಂಗದಲ್ಲಿ ಸಂಪನ್ನಗೊoಡಿತು.Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close