Type Here to Get Search Results !

ಮಧುಮೇಹ'(Diabetes In Kannada) ರೋಗಿಗಳಿಗೆ ಸಿಹಿ ಸುದ್ದಿ-karavalivani

 ಈ ಸುದ್ದಿ ಓದಲು ಕ್ಲಿಕ್ ಮಾಡಿ@karavalivani, @ಕರಾವಳಿವಾಣಿ
ಸಕ್ಕರೆ ಕಾಯಿಲೆ ಎಲ್ಲೆಲ್ಲೂ ಪ್ರವರ್ಧಮಾನಕ್ಕೆ ಬಂದಿರುವ ಶ್ರೀಮಂತ ಕಾಯಿಲೆ. ಹೌದು ಬರಿಯ ಶ್ರೀಮಂತರನ್ನು ಮಾತ್ರ ಕಾಡಿಸುತ್ತಿದ್ದ ಈ ಕಾಯಿಲೆ ಈಗೀಗ ಬಡವರತ್ತ ಕೂಡ ತನ್ನ ಚೂಪು ನೋಟ ಹರಿಸಿದೆ. ಆಹಾರದಲ್ಲಿ ಪಥ್ಯ ಮಾಡುತ್ತಾ ಸಿಹಿತಿಂಡಿ ಕಣ್ಣೆದುರೇ ಇದ್ದರೂ ತಿನ್ನಲಾಗದಂತಹ ಸ್ಥಿತಿ ಈ ಸಕ್ಕರೆ ಕಾಯಿಲೆ ಉಂಟು ಮಾಡುತ್ತದೆ.
ಮಧುಮೇಹ ಕಾಯಿಲೆಯ ಪ್ರಮಾಣ ಆಧುನಿಕ ಜೀವನ ಶೈಲಿಯಿಂದಾಗಿ ಹೆಚ್ಚಾಗುತ್ತಿದೆ. ಹಾಗಾಗಿ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಉಪಕಾರಿಯಾಗಿದೆ.

ಧುಮೇಹ ಅಥವಾ ಸಕ್ಕರೆ ಕಾಯಿಲೆ ಇಂದು ಸಾಮಾನ್ಯವಾಗಿದೆ. ಒತ್ತಡದ ಜೀವನ, ಆಹಾರ ಅಭ್ಯಾಸ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಒಮ್ಮೆ ಮಧುಮೇಹಕ್ಕೆ ತುತ್ತಾದರೆ ಜೀವನ ಪರ್ಯಂತ ಮಾತ್ರೆ ಸೇವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಮಧುಮೇಹ ರೋಗಿಗಳು ಸೇವಿಸುವ 'ಸಿಟಾಗ್ಲಿಫ್ಟಿನ್' ಎಂಬ ಮಾತ್ರೆಯನ್ನು ಶುಕ್ರವಾರದಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕೇವಲ ಅರವತ್ತು ರೂಪಾಯಿಗಳಿಗೆ 10 ಮಾತ್ರೆಗಳ ಪ್ಯಾಕ್ ನಲ್ಲಿ ದೊರೆಯಲಿದೆ.

ಭಾರತೀಯ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಸಂಸ್ಥೆ ಈ ಔಷಧವನ್ನು ಬಿಡುಗಡೆ ಮಾಡಿದ್ದು, 50 ಎಂಜಿ ಮತ್ತು 100 ಎಂಜಿ ಡೋಸ್ ಗಳಲ್ಲಿ ಇದು ದೊರೆಯಲಿದೆ.

ಸಿಟಾಗ್ಲಿಫ್ಟಿನ್ ಫಾಸ್ಫೇಟ್ 50 ಎಂಜಿ ಮಾತ್ರೆಯ ಹತ್ತು ಮಾತ್ರೆಗಳಿಗೆ 60 ರೂಪಾಯಿಗಳಾಗಿದ್ದರೆ, 100 ಎಂಜಿ 10 ಮಾತ್ರೆಗಳಿಗೆ ನೂರು ರೂಪಾಯಿಗಳಾಗಿದೆ. ಇವುಗಳು ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.

 karavalivaninews

'ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರೈತನ ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ತೆಗೆದುಕೊಳ್ಳಲು ಬಂದ ಫೈನಾನ್ಸ್ ಕಂಪನಿಯ ಅಧಿಕಾರಿಗಳು, ಟ್ರ್ಯಾಕ್ಟರ್ ಸಾಲದ ಕಂತು ಸಕಾಲಕ್ಕೆ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ವಿಕಲಚೇತನ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ದುಷ್ಕೃತ್ಯ ಮೆರೆದಿದ್ದಾರೆಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರೈತನ ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ತೆಗೆದುಕೊಳ್ಳಲು ಬಂದ ಫೈನಾನ್ಸ್ ಕಂಪನಿಯ ಅಧಿಕಾರಿಗಳು, ಟ್ರ್ಯಾಕ್ಟರ್ ಸಾಲದ ಕಂತು ಸಕಾಲಕ್ಕೆ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ವಿಕಲಚೇತನ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ದುಷ್ಕೃತ್ಯ ಮೆರೆದಿದ್ದಾರೆ.ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಹಜಾರಿಬಾಗ್ ಹಿರಿಯ ಪೊಲೀಸ್ ಅಧೀಕ್ಷಕ ಮನೋಜ್ ರತನ್ ಚೌತ್ ಪ್ರಕಾರ, ಈ ಸಂಬಂಧ ಹಣಕಾಸು ಕಂಪನಿಯ ಸ್ಥಳೀಯ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಲು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಯಾತ್‌ನ ವಿಕಲಚೇತನ ರೈತ ಮಿಥಿಲೇಶ್ ಮೆಹ್ತಾ ಅವರು ಟ್ರ್ಯಾಕ್ಟರ್ ಖರೀದಿಸಲು ಪಡೆದ ಕಂಪನಿಯ ಸಾಲದ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಗಳ ಬಾಕಿ ಕಂತುಗಳನ್ನು ಠೇವಣಿ ಮಾಡಬೇಕು ಎಂದು ಫೈನಾನ್ಸ್ ಕಂಪನಿಯಿಂದ ಸಂದೇಶ ಬಂದಿತ್ತು. ಆದರೆ ಅದು ಸಾಧ್ಯವಾಗದಿದ್ದಾಗ, ಫೈನಾನ್ಸ್ ಕಂಪನಿಯ ಏಜೆಂಟರು ಮತ್ತು ಅಧಿಕಾರಿಗಳು ಶುಕ್ರವಾರ ಅವರ ಮನೆಗೆ ತಲುಪಿ ಟ್ರ್ಯಾಕ್ಟರ್ ಅನ್ನು ಕೊಂಯೊಯ್ಯಲು ಪ್ರಯತ್ನಿಸಿದರು. ರೈತರ ಟ್ರ್ಯಾಕ್ಟರ್​ ಅನ್ನು ಹಿಂಪಡೆಯಲು ಹೋದಾಗ, ತಕ್ಷಣವೇ ಒಂದು ಲಕ್ಷದ ಇಪ್ಪತ್ತು ಸಾವಿರ ಬಾಕಿ ಮೊತ್ತವನ್ನು ಪಾವತಿಸಲು ಒತ್ತಾಯಿಸಿದರು. ಆದರೆ ಫೈನಾನ್ಸ್ ಕಂಪನಿಯ ಉದ್ಯೋಗಿಗಳು ಒಪ್ಪದೆ ಬಲವಂತವಾಗಿ ಟ್ರ್ಯಾಕ್ಟರ್ ತೆಗೆದುಕೊಳ್ಳಲು ಮುಂದಾದರು. ವಿಕಲಚೇತನ ರೈತನ 27 ವರ್ಷದ ಮಗಳು ಮೋನಿಕಾ ಅವರನ್ನು ತಡೆಯಲು ಓಡಿದಳು, ಆದರೆ ಆಕೆಗೆ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅವರು ಹೇಳಿದರು. ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಫೈನಾನ್ಸ್ ಕಂಪನಿಯ ನೌಕರರನ್ನು ಬಂಧಿಸುವಂತೆ ಒತ್ತಾಯಿಸಿದರು. ಫೈನಾನ್ಸ್​​ನಲ್ಲಿ ಬಡ ಕುಟುಂಬವೊಂದು ಸಾಲ ಪಡೆದುಕೊಂಡಿತ್ತು. ಅದನ್ನು ಮರುಪಾವತಿಸದ ಕಾರಣ ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ. ಹಜಾರಿಬಾಗ್​​ನ ಇಚ್ಚಾಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಮೂರು ತಿಂಗಳ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಫೈನಾನ್ಸ್ ಕಂಪನಿಯ ರಿಕವರಿ ಎಜೆಂಟ್​, ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close