@karavalivani, @ಕರಾವಳಿವಾಣಿ
ಕೋಟ: ಕದ್ರಿಕಟ್ಟು ಸಂಕಮ್ಮ ನಿಲಯದ ಅಣ್ಣಯ್ಯ ಪೂಜಾರಿ 79.ವ ಗುರುವಾರ ಅನಾರೋಗ್ಯದಿಂದ ನಿಧನರಾದರು.
ದ.ಕ ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷ ಕೆ.ಸಿ ಕುಂದರ್ ಒಡನಾಡಿಯಾಗಿ ಅವರ ಜನತಾ ಸಂಸ್ಥೆಯ ಮ್ಯಾನೇಜರ್ ಆಗಿ ಆರಂಭಿಕ ಕಾಲಘಟ್ಟದಲ್ಲಿ ಪಳಗಿದರು.
ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಹಿರಿಯ ಸದಸ್ಯರಾಗಿ,ಮತ್ಸೋದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ಕೆ.ಎo.ಸಿ ಮಣಿಪಾಲಕ್ಕೆ ನೇತ್ರದಾನಗೈದು ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದ್ದಾರೆ.
ಪತ್ನಿ,ಮೂವರು ಪುತ್ರ,ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.