ಮೊಟ್ಟೆಯಲ್ಲಿ ಇರುವಂತಹ ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಹಲವಾರು ಆರೋಗ್ಯಕರ
ಪ್ರಯೋಜನಗಳನ್ನು ಹೊಂದಿವೆ.( Are eggs vegetarian? Or a non-vegetarian? Here is the scientific answer)ಹೀಗಾಗಿ ದಿನಕ್ಕೊಂದು ಮೊಟ್ಟೆಗಳನ್ನು ಸೇವಿಸಲು ವೈದ್ಯರು ಸಲಹೆಯನ್ನು
ನೀಡುತ್ತಾರೆ. ಇದು ಮೂಳೆ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಇದು
ಅಂಗಾಂಶಗಳನ್ನು ಉತ್ತೇಜಿಸುವುದು ಮತ್ತು ಮೆದುಳಿನ ಕ್ರಿಯೆ ಸುಧಾರಣೆಯನ್ನು ಮಾಡುವುದು. ಸಣ್ಣ ಮಕ್ಕಳಿಗೆ
ಮೊಟ್ಟೆ ನೀಡಿದರೆ ಅವರಿಗೆ ಮೆದುಳಿನ ಬೆಳವಣಿಗೆಗೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇದರಿಂದ
ಸಿಗುತ್ತವೆ. ಹೀಗೆ ಅನೇಕ ಪ್ರಯೋಜನಗಳನ್ನು ಹೊಂದಿರುವ ಮೊಟ್ಟೆಯನ್ನು ಸೇವಿಸಲು ಹಲವರು ಹಿಂದೇಟು
ಹಾಕುತ್ತಾರೆ. ಯಾಕೆಂದರೆ ಇದು ಮಾಂಸಾಹಾರ ಎನ್ನುವುದು ಕೆಲವರ ನಂಬಿಕೆ. ಇದಕ್ಕೆ ವೈಜ್ಞಾನಿಕ ಉತ್ತರ
ಇಲ್ಲಿದೆ.ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬ ಚರ್ಚೆ ಚರ್ಚೆಗಳು ನಮ್ಮಲ್ಲಿ ಬಹಳ ದಿನದಿಂದ
ನಡೆಯುತ್ತಿದೆ ಕೆಲವರು ಸಸ್ಯಹಾರಿ ಎಂದರೆ ಇನ್ನು ಕೆಲವರು ಮಾಂಸಾಹಾರಿ ಎಂದು ಹೇಳುತ್ತಾರೆ ಸರಿಯಾದ
ಉತ್ತರವನ್ನು ಯಾರು ಸಹ ನೀಡುವುದಿಲ್ಲ.ಜನರು ಬೇರೆ ಬೇರೆ ವಾದಗಳಿಂದ ತಮ್ಮ ಮಾತನ್ನು
ಸಾಬೀತುಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕೆಲವರು ಮೊಟ್ಟೆಯನ್ನು ಕೋಳಿ ಮೊಟ್ಟೆ ಇಡುತ್ತದೆ, ಹಾಗಾಗಿ
ಇದು ಮಾಂಸಾಹಾರ ಎಂದು ಹೇಳುತ್ತಾರೆ. ಈ ರೀತಿ ಚರ್ಚೆ ಮಾಡುತ್ತಾ ಹೋದರೆ ಈ ಚರ್ಚೆಯು
ಕೊನೆಗೊಳ್ಳುವುದಿಲ್ಲ, ಆದರೆ ವಿಜ್ಞಾನಿಗಳು ಈ ಚರ್ಚೆಗೆ ಉತ್ತರವನ್ನು ಕಂಡುಕೊಂಡಿದ್ದಾರೆ. ಅದು ಏನೆಂದರೆಮೊಟ್ಟೆ ವೆಜ್ ಅಥವಾ ನಾನ್ ವೆಜ್ ಅನ್ನುವ ಪ್ರತಿಯೊಂದು ಚರ್ಚೆಗೆ ಅಂತ್ಯ ಹಾಡಲಾಗಿದೆ. ಏಕೆಂದರೆ ವಿಜ್ಞಾನಿಗಳು
ಅದಕ್ಕೆ ವೈಜ್ಞಾನಿಕ ಉತ್ತರವನ್ನು ಕಂಡುಕೊಂಡಿದ್ದಾರೆ. ಕೋಳಿಯಿಂದ ಹೊರಬರುವ ಮೊಟ್ಟೆಗಳನ್ನು
ಮಾಂಸಾಹಾರಿ ಎಂದು ಭಾವಿಸಿ ಹೆಚ್ಚಿನ ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಈ ಬಗ್ಗೆ ವಿಜ್ಞಾನಿಗಳು ವಿವರವಾದ
ಮಾಹಿತಿ ನೀಡಿದ್ದಾರೆ. ಮೊಟ್ಟೆಯಲ್ಲಿ 3 ಪದರಗಳಿವೆ, ಅದರಲ್ಲಿ ಮೇಲಿನ ಪದರವು ಸಿಪ್ಪೆ, ಎರಡನೇ ಬಿಳಿ ಭಾಗವು
ಅಲ್ಬುಮೆನ್ ಮತ್ತು ಮೂರನೆಯದು ಮೊಟ್ಟೆಯ ಹಳದಿ ಲೋಳೆ ಎಂದು ಅವರು ಹೇಳಿದರು. ಬಿಳಿ ಭಾಗವು
ಪ್ರೋಟೀನ್ ಮಾತ್ರ ಎಂದು ಸಂಶೋಧನೆ ಕಂಡುಹಿಡಿದಿದೆ. ಇದು ಯಾವುದೇ ಪ್ರಾಣಿ ಪದಾರ್ಥವನ್ನು
ಹೊಂದಿರುವುದಿಲ್ಲ. ಅಂದರೆ, ಮೊಟ್ಟೆಯ ಬಿಳಿ ಭಾಗವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ.ಫಲವತ್ತಾದ
ಮೊಟ್ಟೆಗಳು ಮಾಂಸಹಾರಿ
ಪ್ರೋಟೀನ್ ಜೊತೆಗೆ, ಮೊಟ್ಟೆಯ ಹಳದಿ ಲೋಳೆಯು ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಹೊಂದಿರುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಮೊಟ್ಟೆಗಳು ಫಲವತ್ತಾಗದ ಮೊಟ್ಟೆಗಳು ಅಂದರೆ ಕೋಳಿಗೆ 6 ತಿಂಗಳ
ವಯಸ್ಸಾದಾಗ, ಅದು ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತದೆ. ಫಲವತ್ತಾಗದ ಮೊಟ್ಟೆಯು ಎಂದಿಗೂ
ಮರಿಗಳನ್ನು ಉತ್ಪಾದಿಸುವುದಿಲ್ಲ. ಅಂದರೆ ಮೊಟ್ಟೆಯಲ್ಲಿ ಮರಿಯ ಭಾಗವಿಲ್ಲ ಅಂದರೆ ಅಂಹತ ಮೊಟ್ಟೆ
ಮಾಂಸಾಹಾರ ಅಲ್ಲ ಸಸ್ಯಾಹಾರಿಯಾಗಿದೆ. ಎಂದು ವಿಜ್ಞಾನಿಗಳು ಹೇಳಿದ್ದಾರೆ