Type Here to Get Search Results !

ಕೋಡಿ- ಸಮನ್ವಯ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಕೋಡಿ ಇದರ ತ್ರೈಮಾಸಿಕ ಸಭೆ-karavalivani

 


ಕೋಟ: ಕೋಡಿ ಗ್ರಾಮ ಪಂಚಾಯತ್ ಇಲ್ಲಿನ ಸಮನ್ವಯ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇದರ ತ್ರೈಮಾಸಿಕ ಸಭೆಯ ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(karavalivani news) ಕೋಡಿ ಕನ್ಯಾನದ ಸಭಾಭವನದಲ್ಲಿ ಇತ್ತೀಚಿಗೆ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ವಹಿಸಿದ್ದರು.

ಈ ಕಾರ್ಯಕ್ರಮವನ್ನು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ ಸಂಜೀವಿನಿ ಸ್ವಸಹಾಯ ಸಂಘದವರಿಗೆ ಸ್ವ-ಉದ್ಯೋಗದ ಮೂಲಕ ಜೀವನೋಪಾಯವನ್ನು ಯಾವ ರೀತಿ ಕಂಡುಕೊಳ್ಳಬಹುದು ಹಾಗೂ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಸಂತೆಯನ್ನು ನಡೆಸುವುದರ ಮೂಲಕ ಸ್ವ-ಉದ್ಯೋಗದಲ್ಲಿ ನಾವು ತಯಾರಿಸಿದಂತಹ ಉತ್ಪನ್ನಗಳಿಗೆ ನಾವೇ ಮಾರುಕಟ್ಟೆಯನ್ನು ಒದಗಿಸಬಹುದು ಎಂದು ಸಭೆಯಲ್ಲಿ ತಿಳಿಸಿದರು .

 ಈ ಸಭೆಯಲ್ಲಿ ಬ್ರಹ್ಮಾವರ ವಲಯ ಮೇಲ್ವಿಚಾರಕರಾಗಿ ಸ್ವಾತಿ ಗ್ರಾಮ ಮಟ್ಟದ ಸಂಜೀವಿನಿ ಸಂಘದವರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇವತಿ ,ಕಾರ್ಯದರ್ಶಿ ಆಶಾ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಜಿ ಕುಂದರ್ , ಗ್ರಾಮ ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ, ಸಮನ್ವಯ ಸಂಜೀವಿನಿ ಸಂಘದ ಪದಾಧಿಕಾರಿಗಳು, ಎಂ.ಬಿಕೆ, ಎಲ್‌ಸಿಆರ್‌ಪಿಗಳು ಸದಸ್ಯರು, ಗ್ರಾ.ಪಂ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close