Type Here to Get Search Results !

delete

ಕೋಟ ಠಾಣೆಗೆ ನೂತನ ಪಿ ಎಸ್ ಐ ಮಧು.ಬಿ-karavalivani

ಕೋಟ:ಕೋಟ ಆರಕ್ಷರ  ಠಾಣೆಗೆ ನೂನತ ಪಿ.ಎಸ್ ಐ ಆಗಿ ಕಾರ್ಕಳ ನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ   ಮಧು ಬಿ. ನೇಮಕ ನಿಯೋಜನೆಗೊಂಡಿದ್ದಾರೆ. 
ಕಳೆದ 2 ವರ್ಷ 2 ತಿಂಗಳುಗಳ ಕಾಲ ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು,ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು.
ನಗರದೊಳಗೆ ವ್ಯಾಪಾಕವಾಗಿ ನಡೆಯುತಿದ್ದ ಗೋಕಳ್ಳತನ,ಇತ್ಯಾದಿ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಣ ತರುವಲ್ಲಿ ಶ್ರಮಿಸಿದ್ದರು.ಕೊರೊನಾ, ಲಾಕ್ ಡೌನ್ ಅವಧಿಯಲ್ಲಿ ಕಾನೂನಿಗೆ ತೊಡಕಾಗದ ರೀತಿ ಜನಸಾಮಾನ್ಯರ ಜನಜೀವನಕ್ಕೆ ಹೆಚ್ಚಿನ ತೊಂದರೆಯಾಗದ ರೀತಿ ಕರ್ತವ್ಯ ಪಾಲನೆ ಮಾಡಿ ಸುಶೂತ್ರವಾಗಿ ನಿಭಾಯಿಸಿರುವುದು ಇವರ ಕರ್ತವ್ಯದ ನಿರ್ವಹಣೆಯಾಗಿತ್ತು. ಸಾಮಾನ್ಯ ಜನರು ಸಮಸ್ಯೆಗಳನ್ನು ನೇರ ಇವರ ಬಳಿ ತೆರಳಿ ಹೇಳುವಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಜನಮೆಚ್ಚಿದ ಖಡಕ್ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇತ್ತೀಚಿಗೆ ಕೋಟತಟ್ಟು ಕೊರಗ ಕಾಲೋನಿಯ ಪ್ರಕರಣದಲ್ಲಿ ಕೋಟ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಬಿ.ಪಿ ಕರ್ತವ್ಯ ಲೋಪದ ಹಿನ್ನಲ್ಲೆಯಲ್ಲಿ ಅಮಾನತು ಗೊಂಡ ಹಿನ್ನಲ್ಲೆಯಲ್ಲಿ ಮಧು ಬಿ ನೇಮಕಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad-sony

end ad-sony

recent news karavalivani-k

    ------------ With thumb-------------

      add

      close