ಶಂಭು ಪೂಜಾರಿ |
ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ,ಬಿಲ್ಲವ ಸಮುದಾಯದ ಮುಖಂಡ ಪಾರಂಪಳ್ಳಿ ಶಂಭು ಪೂಜಾರಿ (61)ವ.ಗುರುವಾರ ಅನಾರೋಗ್ಯದಿಂದ ನಿಧರಾದರು.ಸಾಲಿಗ್ರಾಮ ಪಟ್ಟಣ ಪಂಚಾಯತ್ 2ಬಾರಿ ಸದಸ್ಯರಾಗಿ ವಿಪಕ್ಷ ನಾಯಕನಾಗಿ,ಪ್ರಾರಂಭದ ಸಾಲಿಗ್ರಾಮ ಪುರಸಭೆಯ ಸದಸ್ಯರಾಗಿ,ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಾಜಿ ನಿರ್ದೇಶಕರಾಗಿ,ಕೋಟ ನಾರಾಯಣಗುರು ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ,ಸಾಲಿಗ್ರಾಮ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪತ್ನಿ ಗೀತಾ ,ಮಾಜಿ ಉಡುಪಿ ಜಿ.ಪಂ ಸದಸ್ಯೆಯಾಗಿದ್ದು , ಒರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.